ಓದುವ ಮೋಡ್

3.4
3.06ಸಾ ವಿಮರ್ಶೆಗಳು
500ಸಾ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಕಡಿಮೆ ದೃಷ್ಟಿ ಹೊಂದಿರುವ, ದೃಷ್ಟಿಹೀನತೆ ಹೊಂದಿರುವ ಹಾಗೂ ಡಿಸ್ಲೆಕ್ಸಿಯಾ ಸಮಸ್ಯೆಯಿಂದ ಬಳಲುತ್ತಿರುವ ಜನರಿಗಾಗಿ ವಿನ್ಯಾಸಗೊಳಿಸಲಾಗಿದೆ, ಕಸ್ಟಮೈಸ್ ಮಾಡಬಹುದಾದ ಕಾಂಟ್ರಾಸ್ಟ್, ಪಠ್ಯದ ಗಾತ್ರ, ಟೆಕ್ಸ್ಟ್-ಟು-ಸ್ಪೀಚ್, ಪುಟಗಳ ಅವ್ಯವಸ್ಥೆ ಹಾಗೂ ಫಾಂಟ್ ಪ್ರಕಾರಗಳ ಮೇಲೆ ಫೋಕಸ್ ಮಾಡುವ ಮೂಲಕ ಸ್ಕ್ರೀನ್ ಮೇಲಿನ ಪಠ್ಯವನ್ನು ಓದುವ ನಿಮ್ಮ ಅನುಭವವನ್ನು ಸುಧಾರಿಸಲು ಓದುವ ಮೋಡ್ ಸಹಾಯ ಮಾಡುತ್ತದೆ. ಡೌನ್‌ಲೋಡ್ ಮಾಡಿದ ನಂತರ, ಆ್ಯಪ್ ನಿಮ್ಮ ತ್ವರಿತ ಸೆಟ್ಟಿಂಗ್‍ಗಳೊಂದಿಗೆ ಸಂಯೋಜನೆಗೊಳ್ಳುತ್ತದೆ ಹಾಗೂ ಅದನ್ನು ಆ್ಯಪ್‌ಗಳು ಮತ್ತು ವೆಬ್ ಪುಟಗಳಾದ್ಯಂತ ಸುಲಭವಾಗಿ ಆ್ಯಕ್ಸೆಸ್ ಮಾಡಬಹುದು.

ಸೂಚನೆಗಳು:

ಪ್ರಾರಂಭಿಸುವುದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:

1. Play Store ಮೂಲಕ ಓದುವ ಮೋಡ್ ಅನ್ನು ಡೌನ್‌ಲೋಡ್ ಮಾಡಿ ಹಾಗೂ ಇನ್‌ಸ್ಟಾಲ್ ಮಾಡಿ
2. ನಿಮ್ಮ ಹೋಮ್ ಸ್ಕ್ರೀನ್‌ನಲ್ಲಿ ಓದುವ ಮೋಡ್ ಅನ್ನು ಕಂಡುಕೊಳ್ಳಿ ಹಾಗೂ ಅದನ್ನು ತೆರೆಯಲು ಟ್ಯಾಪ್ ಮಾಡಿ
3. ಟುಟೋರಿಯಲ್ ಅನ್ನು ಓದಿ ಹಾಗೂ ಅದು ನಿಮ್ಮನ್ನು ಕೊನೆಯಲ್ಲಿ ಸೆಟ್ಟಿಂಗ್‌ಗಳಿಗೆ ಮರುನಿರ್ದೇಶಿಸುತ್ತದೆ
4. ಸೆಟ್ಟಿಂಗ್‌ಗಳಲ್ಲಿ, "ಓದುವ ಮೋಡ್" ಅನ್ನು ಟ್ಯಾಪ್ ಮಾಡಿ ಹಾಗೂ ನಿಮ್ಮ ಸಾಧನವನ್ನು ಆ್ಯಕ್ಸೆಸ್ ಮಾಡುವುದಕ್ಕೆ ಓದುವ ಮೋಡ್‌ಗೆ ಅನುವು ಮಾಡಿಕೊಡಲು “ಓದುವ ಮೋಡ್ ಶಾರ್ಟ್‌ಕಟ್” ಅನ್ನು ಟಾಗಲ್ ಮಾಡಿ
5. ವಿವಿಧ ಓದುವ ಮೋಡ್ ಎಂಟ್ರಿ ಪಾಯಿಂಟ್‌ಗಳನ್ನು ಸೆಟಪ್ ಮಾಡಲು https://support.google.com/accessibility/android/answer/7650693 ಗೆ ಭೇಟಿ ನೀಡಿ

ಪ್ರಮುಖ ಫೀಚರ್‌ಗಳು:

ಫೋಕಸ್ ಮಾಡಿದ ಓದುವ ವೀಕ್ಷಣೆ: ವಿಷಯವನ್ನು ಆ್ಯಕ್ಸೆಸ್ ಮಾಡಲು ಹಾಗೂ ಫೋಕಸ್ ಮಾಡಲು ಸುಲಭಗೊಳಿಸುವುದಕ್ಕಾಗಿ ಯಾವುದೇ ಗೊಂದಲವಿಲ್ಲದ ಕಸ್ಟಮೈಸ್ ಮಾಡಬಹುದಾದ ಓದುವ ವಾತಾವರಣವನ್ನು ಓದುವ ಮೋಡ್ ಒದಗಿಸುತ್ತದೆ
ಟೆಕ್ಸ್ಟ್-ಟು-ಸ್ಪೀಚ್: ಬಟನ್ ಅನ್ನು ಸ್ಪರ್ಶಿಸುವ ಮೂಲಕ ಲಿಖಿತ ವಿಷಯವನ್ನು ಜೋರಾಗಿ ಓದಿ ಹೇಳುವುದನ್ನು ಆಲಿಸಿ. ಉತ್ತಮ ಗುಣಮಟ್ಟದ ದೀರ್ಘ ರೂಪದ ಧ್ವನಿಗಳನ್ನು ಆಯ್ಕೆಮಾಡಿ. ಓದುವ ಸಮಯದಲ್ಲಿ ರಿವೈಂಡ್ ಮಾಡಲು, ಫಾಸ್ಟ್ ಫಾರ್ವರ್ಡ್ ಮಾಡಲು ಹಾಗೂ ಓದುವ ವೇಗವನ್ನು ಬದಲಾಯಿಸಲು ಅನುವು ಮಾಡಿಕೊಡುವ ಸುಲಭವಾಗಿ ಆ್ಯಕ್ಸೆಸ್ ಮಾಡಬಹುದಾದ ಆಡಿಯೋ ನಿಯಂತ್ರಣದ ಆಯ್ಕೆಗಳು
ಫಾಂಟ್ ಪ್ರಕಾರ ಹಾಗೂ ಗಾತ್ರವನ್ನು ಸರಿಹೊಂದಿಸಿ: ನಿಮ್ಮ ಓದುವ ಅಗತ್ಯಗಳಿಗೆ ಯಾವುದು ಉತ್ತಮ ಎಂಬುದನ್ನು ಕಸ್ಟಮೈಸ್ ಮಾಡುವುದಕ್ಕಾಗಿ ಫಾಂಟ್ ಗಾತ್ರಗಳು, ಶೈಲಿಗಳು, ಬಣ್ಣಗಳು ಮತ್ತು ಲೈನ್ ಸ್ಪೇಸ್‌ಗಳ ನಡುವೆ ತ್ವರಿತವಾಗಿ ಟಾಗಲ್ ಮಾಡಿ
ತ್ವರಿತ ಆ್ಯಕ್ಸೆಸ್: ಡೌನ್‌ಲೋಡ್ ಮಾಡಿದ ನಂತರ, ವೇಗವಾಗಿ ಆ್ಯಕ್ಸೆಸ್ ಮಾಡುವುದಕ್ಕಾಗಿ ಓದುವ ಮೋಡ್ ಫೋನ್ ಇಂಟರ್‌ಫೇಸ್‌ನೊಂದಿಗೆ ಸಂಯೋಜನೆಗೊಳ್ಳುತ್ತದೆ
ಬಹು-ಭಾಷಾ ಬೆಂಬಲ: ಓದುವ ಮೋಡ್ ಇಂಗ್ಲಿಷ್, ಫ್ರೆಂಚ್, ಇಟಾಲಿಯನ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಬೆಂಬಲಿತವಾಗಿದೆ ಹಾಗೂ ಇನ್ನೂ ಹೆಚ್ಚುವರಿ ಭಾಷೆಗಳಲ್ಲಿ ಲಭ್ಯವಾಗಲಿದೆ
TalkBack ನೊಂದಿಗೆ ಹೊಂದಾಣಿಕೆಯಾಗಿದೆ: ನಿಮ್ಮ ಸ್ಕ್ರೀನ್ ರೀಡರ್ ಅನ್ನು ಬಳಸುವಾಗ ಓದುವ ಮೋಡ್ ಅನ್ನು ಸುಲಭವಾಗಿ ಬಳಸಿ.
ಗೌಪ್ಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ: ನಿಮ್ಮ ಫೋನ್‌ನಿಂದ ಯಾವುದೇ ವಿಷಯವನ್ನು ಎಂದಿಗೂ ಹೊರಗಿನವರ ಜೊತೆ ಹಂಚಿಕೊಳ್ಳಲಾಗುವುದಿಲ್ಲ.

ಪ್ರತಿಕ್ರಿಯೆ ನೀಡಲು ಹಾಗೂ ಉತ್ಪನ್ನದ ಕುರಿತು ಅಪ್‌ಡೇಟ್‌ಗಳನ್ನು ಪಡೆಯಲು https://groups.google.com/forum/#!forum/accessible ಗೆ ಸೇರಿಕೊಳ್ಳಿ.

ಅಗತ್ಯತೆಗಳು:

• Android 9 ಹಾಗೂ ಅದರ ನಂತರದ ಆವೃತ್ತಿಯನ್ನು ಹೊಂದಿರುವ ಫೋನ್‌ಗಳಿಗಾಗಿ ಲಭ್ಯವಿದೆ
• ಓದುವ ಮೋಡ್ ಇಂಗ್ಲಿಷ್, ಫ್ರೆಂಚ್, ಇಟಾಲಿಯನ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಪ್ರಸ್ತುತ ಬೆಂಬಲಿತವಾಗಿದೆ

ಅನುಮತಿಗಳ ಸೂಚನೆ:
• ಆ್ಯಕ್ಸೆಸ್ಸಿಬಿಲಿಟಿ ಸೇವೆ: ಈ ಆ್ಯಪ್ ಆ್ಯಕ್ಸೆಸ್ಸಿಬಿಲಿಟಿ ಸೇವೆಯಾಗಿರುವುದರಿಂದ, ನಿಮ್ಮ ಕ್ರಿಯೆಗಳನ್ನು ಮತ್ತು ವಿಂಡೋದಲ್ಲಿರುವ ವಿಷಯವನ್ನು ಇದು ಗಮನಿಸಬಹುದು.
ಅಪ್‌ಡೇಟ್‌ ದಿನಾಂಕ
ಅಕ್ಟೋ 17, 2023

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ ಮತ್ತು ಸಾಧನ ಅಥವಾ ಇತರ ID ಗಳು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

3.4
2.96ಸಾ ವಿಮರ್ಶೆಗಳು

ಹೊಸದೇನಿದೆ

ಓದುವ ಮೋಡ್‌ನ ಆರಂಭಿಕ ಬಿಡುಗಡೆ.