ನಿಮ್ಮ ಡಿಜಿಟಲ್ ಹವ್ಯಾಸಗಳ ಸಂಪೂರ್ಣ ಚಿತ್ರಣವನ್ನು ನೋಡಿ ಮತ್ತು ನೀವು ಬಯಸಿದಾಗ ಕನೆಕ್ಷನ್ ಅನ್ನು ಕಡಿತಗೊಳಿಸಿ.
ಈ ಕೆಳಗಿನ ನಿಮ್ಮ ಡಿಜಿಟಲ್ ಹವ್ಯಾಸಗಳ ದೈನಂದಿನ ವೀಕ್ಷಣೆ ಪಡೆಯಿರಿ:
• ನೀವು ವಿವಿಧ ಆ್ಯಪ್‌ಗಳನ್ನು ಎಷ್ಟು ಬಾರಿ ಬಳಸುತ್ತೀರಿ
• ನೀವು ಎಷ್ಟು ಅಧಿಸೂಚನೆಗಳನ್ನು ಪಡೆಯುತ್ತೀರಿ
• ನಿಮ್ಮ ಫೋನ್ ಅನ್ನು ನೀವು ಎಷ್ಟು ಬಾರಿ ಪರಿಶೀಲಿಸುತ್ತೀರಿ
ನೀವು ಬಯಸಿದಾಗ ಕನೆಕ್ಷನ್ ಅನ್ನು ಕಡಿತಗೊಳಿಸಿ:
• ನೀವು ಆ್ಯಪ್‌ಗಳನ್ನು ಎಷ್ಟರ ಮಟ್ಟಿಗೆ ಬಳಸುತ್ತೀರಿ ಎಂಬುದಕ್ಕೆ ಮಿತಿಗಳನ್ನು ಹೊಂದಿಸಲು ನಿಮಗೆ ದೈನಂದಿನ ಆ್ಯಪ್ ಟೈಮರ್‌ಗಳು ಅವಕಾಶ ನೀಡುತ್ತವೆ.
• ರಾತ್ರಿಯ ಸಮಯದಲ್ಲಿ ಒಳ್ಳೆಯ ನಿದ್ದೆಗಾಗಿ ಅಧಿಸೂಚನೆಗಳನ್ನು 'ಅಡಚಣೆ ಮಾಡಬೇಡಿ' ಮೂಲಕ ನಿಶ್ಶಬ್ದಗೊಳಿಸಿದಾಗ, ನಿಮ್ಮ ಸ್ಕ್ರೀನ್ ಅನ್ನು ಗ್ರೇಸ್ಕೇಲ್‌ಗೆ ಮಬ್ಬಾಗಿಸಲು ವೇಳಾಪಟ್ಟಿಯನ್ನು ನಿಗದಿಪಡಿಸುವ ಮೂಲಕ, ಬೆಡ್‌ಟೈಮ್ ಮೋಡ್ ರಾತ್ರಿ ಸಮಯದಲ್ಲಿ ಸ್ವಿಚ್ ಆಫ್ ಮಾಡಲು ನಿಮಗೆ ನೆನಪಿಸುತ್ತದೆ.
• ಗಮನ ಬೇರೆಡೆ ಸೆಳೆಯುವ ಆ್ಯಪ್‌ಗಳನ್ನು ಒಂದೇ ಟ್ಯಾಪ್‌ನಲ್ಲಿ ವಿರಾಮಗೊಳಿಸಲು ಫೋಕಸ್ ಮೋಡ್ ನಿಮಗೆ ಅವಕಾಶ ಮಾಡಿಕೊಡುತ್ತದೆ. ಇದರಿಂದ ನಿಮ್ಮ ಸಮಯದ ಮೇಲೆ ನೀವು ಫೋಕಸ್ ಮಾಡಬಹುದು. ಫೋಕಸ್ ಮೋಡ್ ಅನ್ನು ಸ್ವಯಂಚಾಲಿತವಾಗಿ ಆನ್ ಮಾಡಲು ನೀವು ವೇಳಾಪಟ್ಟಿಯನ್ನು ಸಹ ನಿಗದಿಪಡಿಸಬಹುದು ಮತ್ತು ನೀವು ಕೆಲಸ, ಶಾಲೆ ಅಥವಾ ಮನೆಯಲ್ಲಿರುವಾಗ ಗಮನ ಬೇರೆಡೆ ಸೆಳೆಯುವುದನ್ನು ಕಡಿಮೆ ಮಾಡಬಹುದು.
ಪ್ರಾರಂಭಿಸಿ:
• ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳ ಮೆನುವಿನಲ್ಲಿ 'ಡಿಜಿಟಲ್ ಯೋಗಕ್ಷೇಮ'ವನ್ನು ಹುಡುಕಿ
ಪ್ರಶ್ನೆಯನ್ನು ಹೊಂದಿರುವಿರಾ? ಸಹಾಯ ಕೇಂದ್ರವನ್ನು ಪರಿಶೀಲಿಸಿ: https://support.google.com/android/answer/9346420
ಅಪ್‌ಡೇಟ್ ದಿನಾಂಕ
ಅಕ್ಟೋ 21, 2024