Google Home

4.1
2.69ಮಿ ವಿಮರ್ಶೆಗಳು
500ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಮ್ಮ Google Nest, Google Wifi, Google Home ಮತ್ತು Chromecast ಸಾಧನಗಳ ಜೊತೆಗೆ ಲೈಟ್‌ಗಳು, ಕ್ಯಾಮರಾಗಳು, ಥರ್ಮೋಸ್ಟಾಟ್‌ಗಳು ಹಾಗೂ ಇನ್ನೂ ಹೆಚ್ಚಿನ ಸಾವಿರಾರು ಹೊಂದಾಣಿಕೆಯಾಗುವ ಸಂಪರ್ಕಿತ ಮನೆಯ ಉತ್ಪನ್ನಗಳನ್ನು ಸೆಟಪ್ ಮಾಡಿ, ನಿರ್ವಹಿಸಿ ಮತ್ತು ನಿಯಂತ್ರಿಸಿ - ಇದೆಲ್ಲವನ್ನು Google Home ಆ್ಯಪ್‌ನಿಂದ ಮಾಡಿ.

ಲೈಟ್‌ಗಳನ್ನು ಆನ್ ಮಾಡಿ, ಥರ್ಮೋಸ್ಟಾಟ್ ಅನ್ನು ಹೊಂದಿಸಿ ಅಥವಾ ನಿಮ್ಮ ಮುಂಭಾಗದ ಬಾಗಿಲಲ್ಲಿ ವ್ಯಕ್ತಿ ಅಥವಾ ಪ್ಯಾಕೇಜ್ ಇರುವಾಗ ಎಚ್ಚರಿಕೆಯನ್ನು ಪಡೆಯಿರಿ. ನಾವು ನಿಯಂತ್ರಣಗಳು ಮತ್ತು ಸುಧಾರಣೆಗಳನ್ನು ಸೇರಿಸುವುದನ್ನು ಮುಂದುವರಿಸುವುದರಿಂದ Wear OS ನಲ್ಲಿ Google Home ಪೂರ್ವವೀಕ್ಷಣೆಯಾಗಿ ಲಭ್ಯವಿರುತ್ತದೆ.

ನಿಮ್ಮ ಮನೆಯ ಒಂದು ನೋಟ.
ನೀವು ಚಲನಚಿತ್ರವನ್ನು ವೀಕ್ಷಿಸಲು ಬಯಸಿದಾಗ ಸಂಗೀತ ಪ್ಲೇ ಮಾಡುವುದು ಅಥವಾ ಲೈಟ್‌ಗಳನ್ನು ಮಂದಗೊಳಿಸುವುದು ಮುಂತಾದ, ನೀವು ಹೆಚ್ಚಾಗಿ ಮಾಡುವ ಕಾರ್ಯಗಳಿಗೆ ಹೋಮ್ ಟ್ಯಾಬ್ ನಿಮಗೆ ಶಾರ್ಟ್‌ಕಟ್‌ಗಳನ್ನು ನೀಡುತ್ತದೆ. ಕೇವಲ ಒಂದು ಅಥವಾ ಎರಡು ಟ್ಯಾಪ್‌ನೊಂದಿಗೆ ಎಲ್ಲವನ್ನೂ ನಿಯಂತ್ರಿಸಿ – ಮತ್ತು ಉತ್ತಮ ವಿಷಯಗಳನ್ನು ವೇಗವಾಗಿ ಪಡೆಯಿರಿ. ಫೀಡ್ ಟ್ಯಾಬ್ ನಿಮ್ಮ ಮನೆಯ ಪ್ರಮುಖ ಈವೆಂಟ್‌ಗಳನ್ನು ಒಂದೇ ಸ್ಥಳದಲ್ಲಿ ಹೈಲೈಟ್ ಮಾಡುತ್ತದೆ. ಇಲ್ಲಿ, ನಿಮ್ಮ ಸಾಧನಗಳಿಂದ ಇನ್ನಷ್ಟನ್ನು ಪಡೆಯಲು ಮತ್ತು ನಿಮ್ಮ ಮನೆಯ ಸೆಟಪ್ ಅನ್ನು ಸುಧಾರಿಸಲು ಸಹಾಯ ಮಾಡುವ ವಿಧಾನಗಳನ್ನು ಸಹ ನೀವು ಕಾಣಬಹುದು.

ಹೊಂದಾಣಿಕೆಯಾಗುವ ಲೈಟ್‌ಗಳನ್ನು ಆನ್ ಮಾಡಲು, ಹವಾಮಾನವನ್ನು ಪರೀಕ್ಷಿಸಲು, ಸುದ್ದಿಗಳನ್ನು ಪ್ಲೇ ಮಾಡಲು ಮತ್ತು ಇನ್ನಷ್ಟನ್ನು ಮಾಡಲು ಒಂದು ಸರಳ ಕಮಾಂಡ್ ಮೂಲಕ ಅನುಮತಿಸುವ ದಿನಚರಿಗಳನ್ನು ರಚಿಸಿ.

ನಿಮ್ಮ ಹೊಂದಾಣಿಕೆಯಾಗುವ ಮನೆಯ ಸಾಧನಗಳಲ್ಲಿ ಎಲ್ಲಾ ಸಕ್ರಿಯ ಆಡಿಯೋ ಮತ್ತು ವೀಡಿಯೊ ಸ್ಟ್ರೀಮ್‌ಗಳನ್ನು ಒಂದೇ ಸ್ಥಳದಲ್ಲಿ ನೋಡಿ, ವಾಲ್ಯೂಮ್ ಬದಲಾಯಿಸಿ, ಮುಂದಿನ ಟ್ರ್ಯಾಕ್‌ಗೆ ತೆರಳಿ ಅಥವಾ ಅವರು ಯಾವ ಸ್ಪೀಕರ್‌ಗಳಿಂದ ಪ್ಲೇ ಮಾಡುತ್ತಿದ್ದಾರೆ ಎಂಬುದನ್ನು ತ್ವರಿತವಾಗಿ ಬದಲಾಯಿಸಿ.

ಒಂದು ನೋಟದಿಂದ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.
ನಿಮ್ಮ ಮನೆಯ ಸ್ಥಿತಿಯನ್ನು ತೋರಿಸಲು ಮತ್ತು ನೀವು ತಪ್ಪಿಸಿಕೊಂಡಿರಬಹುದಾದದ್ದು ಏನಾದರೂ ಇದ್ದರೆ ಅದರ ಕುರಿತು ನಿಮ್ಮನ್ನು ಅಪ್‌ ಟು ಡೇಟ್‌ ಆಗಿರಿಸಲು Google Home ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಮನೆಗೆ ಯಾವಾಗ ಬೇಕಾದರೂ ಚೆಕ್ ಇನ್ ಮಾಡಿ ಮತ್ತು ಇತ್ತೀಚಿನ ಈವೆಂಟ್‌ಗಳ ಕುರಿತು ಪುನರಾವಲೋಕನ ಮಾಡಿ. ನೀವು ದೂರದಲ್ಲಿರುವಾಗ ಏನಾದರೂ ಪ್ರಮುಖವಾದ ಘಟನೆ ಸಂಭವಿಸಿದರೆ ನೀವು ನೋಟಿಫಿಕೇಶನ್ ಅನ್ನು ಸಹ ಪಡೆಯಬಹುದು.

ನಿಮ್ಮ Nest Wifi ಮತ್ತು Google Wifi ಅನ್ನು Google Home ಆ್ಯಪ್ ಮೂಲಕ ನಿಮಿಷಗಳಲ್ಲಿ ಸೆಟಪ್ ಮಾಡಿ. ಇಂಟರ್‌ನೆಟ್ ಸ್ಪೀಡ್‌ ಟೆಸ್ಟ್‌ಗಳನ್ನು ರನ್ ಮಾಡಿ, ಅತಿಥಿ ನೆಟ್‌ವರ್ಕ್ ಅನ್ನು ಸೆಟಪ್ ಮಾಡಿ ಮತ್ತು ನಿಮ್ಮ ವೈ-ಫೈ ಪಾಸ್‌ವರ್ಡ್ ಅನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸುಲಭವಾಗಿ ಹಂಚಿಕೊಳ್ಳಿ. ಮಕ್ಕಳಿಗಾಗಿ ಆನ್‌ಲೈನ್ ಸಮಯವನ್ನು ನಿರ್ವಹಿಸಲು ವೈ-ಫೈ ವಿರಾಮದಂತಹ ಪೋಷಕ ನಿಯಂತ್ರಣಗಳನ್ನು ಬಳಸಿ. ಎಲ್ಲಾ ಸಾಧನಗಳಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮತ್ತು ಗೇಮಿಂಗ್ ಟ್ರಾಫಿಕ್‌ಗಳಿಗೆ ಸ್ವಯಂಚಾಲಿತವಾಗಿ ಆದ್ಯತೆ ನೀಡಿ ಅಥವಾ ಎಲ್ಲಾ ಟ್ರಾಫಿಕ್ ಪ್ರಕಾರಗಳಿಗಾಗಿ ಯಾವ ಸಾಧನಗಳಿಗೆ ಆದ್ಯತೆ ನೀಡಬೇಕೆಂದು ನಿರ್ಧರಿಸಿ. ನಿಮ್ಮ ನೆಟ್‌ವರ್ಕ್‌ನ ಕುರಿತು ಹೆಚ್ಚಿನ ಒಳನೋಟಗಳನ್ನು ಪಡೆಯಿರಿ, ಅವು ಹೊಸ ಸಾಧನವು ನಿಮ್ಮ ನೆಟ್‌ವರ್ಕ್‌ಗೆ ಸೇರುವಾಗ ಬರುವ ನೋಟಿಫಿಕೇಶನ್ ಆಗಿರಬಹುದು ಅಥವಾ ಕಳಪೆ ಇಂಟರ್‌ನೆಟ್‌ ಸಂಪರ್ಕಗಳನ್ನು ಟ್ರಬಲ್‌ಶೂಟಿಂಗ್ ಮಾಡುವ ಕುರಿತು ವಿವರವಾದ ಒಳನೋಟಗಳಾಗಿರಬಹುದು.

ಖಾಸಗಿ ಮನೆ ಎಂದರೆ ಅದು ಎಲ್ಲದಕ್ಕೂ ಸಹಾಯಕಾರಿಯಾಗಿರಬೇಕು.
ನಿಮ್ಮ ಗೌಪ್ಯತೆಯನ್ನು ರಕ್ಷಿಸುವುದು ವಿಶ್ವದ ಅತ್ಯಾಧುನಿಕ ಭದ್ರತಾ ಮೂಲಸೌಕರ್ಯಗಳಿಂದ ಆರಂಭವಾಗುತ್ತದೆ ಮತ್ತು ನಾವು ಅದನ್ನು ಎಲ್ಲಾ Google ಉತ್ಪನ್ನಗಳಲ್ಲಿ ನೇರವಾಗಿ ನಿರ್ಮಿಸುತ್ತೇವೆ, ಹಾಗಾಗಿ ಡಿಫಾಲ್ಟ್ ಆಗಿ ಅವುಗಳು ಸುರಕ್ಷಿತವಾಗಿರುತ್ತವೆ. ನಿಮ್ಮ Google ಖಾತೆಯಲ್ಲಿನ ಅಂತರ್ನಿರ್ಮಿತ ಭದ್ರತೆಯು ಬೆದರಿಕೆಗಳು ನಿಮ್ಮನ್ನು ತಲುಪುವ ಮೊದಲು, ಸ್ವಯಂಚಾಲಿತವಾಗಿ ಅವುಗಳನ್ನು ಪತ್ತೆ ಮಾಡುತ್ತದೆ ಮತ್ತು ನಿರ್ಬಂಧಿಸುತ್ತದೆ, ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿಯು ಸುರಕ್ಷಿತವಾಗಿರುತ್ತದೆ.

ನಿಮ್ಮನ್ನು ನಿಯಂತ್ರಣದಲ್ಲಿಡುವ ಗೌಪ್ಯತೆ ಟೂಲ್‌ಗಳನ್ನು ನಾವು ನಿರ್ಮಿಸುತ್ತೇವೆ.
ನಿಮ್ಮ Google Assistant ನ ಚಟುವಟಿಕೆ, ಗೌಪ್ಯತೆ ಸೆಟ್ಟಿಂಗ್‌ಗಳು, ಮಾಹಿತಿ ಮತ್ತು ವೈಯಕ್ತಿಕ ಆದ್ಯತೆಗಳನ್ನು ನಿಯಂತ್ರಿಸಿ. ನಿಮ್ಮ ಚಟುವಟಿಕೆಯನ್ನು ನೋಡಿ, ಅದನ್ನು ಹಸ್ತಚಾಲಿತವಾಗಿ ಅಳಿಸಿ ಅಥವಾ ಅದನ್ನು ಸ್ವಯಂಚಾಲಿತವಾಗಿ ಅಳಿಸಲು ಆಯ್ಕೆ ಮಾಡಿ. ನಿಮ್ಮ ಧ್ವನಿಯ ಮೂಲಕ Google Assistant ನಲ್ಲಿ ನಿಮ್ಮ ಗೌಪ್ಯತೆಯನ್ನು ನಿಯಂತ್ರಿಸಿ. ಹೆಚ್ಚು ಸಾಮಾನ್ಯವಾಗಿರುವ ಗೌಪ್ಯತೆ ಮತ್ತು ಭದ್ರತಾ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು, "ನನ್ನ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಾನು ಎಲ್ಲಿ ಬದಲಾಯಿಸಬಹುದು?" ಎಂಬಂತಹ ಪ್ರಶ್ನೆಗಳನ್ನು ಕೇಳಿ.

ನಾವು ನಿಮ್ಮ ಮಾಹಿತಿಯನ್ನು ಹೇಗೆ ರಕ್ಷಿಸುತ್ತೇವೆ ಮತ್ತು ನಿಮ್ಮ ಗೌಪ್ಯತೆಯನ್ನು ಗೌರವಿಸುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು safety.google/nest ನಲ್ಲಿ Google Nest ಸುರಕ್ಷತಾ ಕೇಂದ್ರಕ್ಕೆ ಭೇಟಿ ನೀಡಿ.

* ಕೆಲವು ಉತ್ಪನ್ನಗಳು ಮತ್ತು ಫೀಚರ್‌ಗಳು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು. ಹೊಂದಾಣಿಕೆಯಾಗುವ ಸಾಧನಗಳು ಬೇಕಾಗುತ್ತವೆ.
ಅಪ್‌ಡೇಟ್‌ ದಿನಾಂಕ
ಏಪ್ರಿ 22, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 6 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.1
2.54ಮಿ ವಿಮರ್ಶೆಗಳು
Sripathi Hanjar
ಜನವರಿ 8, 2024
Good
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Kiran s S narik
ಡಿಸೆಂಬರ್ 12, 2022
S good
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
chaithra chaithra
ಮಾರ್ಚ್ 28, 2021
Nice
9 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ಮುಂದಿನ ಕೆಲವು ವಾರಗಳಲ್ಲಿ ನಾವು ಈ ಕೆಳಗಿನ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಲಿದ್ದೇವೆ:
ಚಟುವಟಿಕೆ ಟ್ಯಾಬ್‌ನ ಮೇಲ್ಭಾಗದಿಂದ ಸಾಧನಗಳು, ಈವೆಂಟ್‌ಗಳು ಮತ್ತು/ಅಥವಾ ದಿನಾಂಕಗಳ ಪ್ರಕಾರ ತ್ವರಿತವಾಗಿ ಫಿಲ್ಟರ್ ಮಾಡಿ.
ನೀವು ಮಿಸ್ ಮಾಡಿಕೊಂಡರೆ, ಈ ಕೆಳಗಿನ ಹಿಂದಿನ ಪ್ರಮುಖ ಅಪ್‌ಡೇಟ್‌ಗಳು ಸೇರಿವೆ:
ಚಟುವಟಿಕೆ ಟ್ಯಾಬ್ ಇತಿಹಾಸದ ಮೂಲಕ ವೇಗವಾಗಿ ಸ್ಕ್ರಾಲ್ ಮಾಡಲು ಸಹಾಯ ಮಾಡುವ ಸುಧಾರಣೆಗಳು.
Home ಆ್ಯಪ್‌ನಲ್ಲಿ Matter ಸಾಧನ ಸೆಟಪ್‌ನ ಸುಧಾರಣೆಗಳು