ಬಿಲ್ಟ್-ಇನ್ Fitbit ಜೊತೆ, ನಿಮ್ಮ ವಾಚ್ ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಗುರಿಯತ್ತ ಕೆಲಸ ಮಾಡುವ ಪವರ್‌ಫುಲ್ ಸಾಧನವಾಗಿದೆ. ನಿಮ್ಮ ಮಾರ್ನಿಂಗ್ ರಿಪೋರ್ಟ್ ಆಧರಿಸಿ ನಿಮ್ಮ ದಿನ ಮತ್ತು ಚಟುವಟಿಕೆಯ ಮಟ್ಟವನ್ನು ಪ್ಲಾನ್ ಮಾಡಿ, ಇಲ್ಲಿ ನೀವು ಸಹಾಯಕವಾದ ಒಳನೋಟ, ನಿಮ್ಮ ದೈನಂದಿನ ಸಿದ್ಧತೆಯ ಸ್ಕೋರ್, ಹೆಲ್ತ್ ಮೆಟ್ರಿಕ್ ಹಾಗೂ ದೈನಂದಿನ ಗುರಿ ನೋಡಬಹುದು. ಜೊತೆಗೆ, ನಡಿಗೆಯ ಕುರಿತ ರಿಮೈಂಡರ್‌ಗಳಂತಹ ಆರೋಗ್ಯಕರ ಅಭ್ಯಾಸಗಳಿಗೆ ಸಂಬಂಧಿಸಿದ ಉಪಯುಕ್ತ ನಡ್ಜ್‌ಗಳನ್ನು ಪಡೆಯಿರಿ.
ಬೆಳಗಿನ ಕ್ರಿಯೆಗಳು, ಪೌಷ್ಠಿಕ ಆಹಾರ ಸೇವನೆಯಿಂದ ಹಿಡಿದು ವೈಂಡಿಂಗ್ ಡೌನ್‌ವರೆಗೂ ಸ್ವಲ್ಪ ಸುಲಭಗೊಳಿಸುವ, ಸ್ವಯಂ-ಆರೈಕೆ ಮಾಡುವ ಇನ್ನಷ್ಟು ಕೆಲವು ಆ್ಯಪ್‌ಗಳು ಇಲ್ಲಿವೆ.